Monday, September 21, 2009

ರವಿ

ಮೂಡಣದಿ ನನ್ನವಳು ನಡಿಯುತಿರಲು ರವಿ ಕಾದ ಹೊ೦ಬೆಳಕು ಬಿರಲು
ಪಡುವಕೆ ನನ್ನವಳು ನಡಿಯುತಿರಲು ಸಮಯಕೆ ಕಾಯದೆ ರವಿಯು ಒಡಿದ ಅವಳ ಜತೆ ಸಾಗಲು
ಕನಸು ಮರುಗುತಿಹುದು ಇ೦ತ ಬೊ೦ಬೆ ತೊರಲು
ಹ್ರುದಯದ ಚಿಪ್ಪು ತೆರೆದಿಹುದು ಇ೦ತ ಮುತ್ತು ಸೇರಿಸಲು

Wednesday, September 16, 2009

ಗಾಳಿಪಟ

ಆಗಿದೆಯಲ್ಲ ಮನವು ಗಾಳಿಪಟ
ನಿನ್ನನೆ ಹುಡುಕಿ ಆಗಿದೆ ಅದು ಧೂಳಿಪಟ
ತಿಳಿಸುವುದ೦ತೆ ಅದು ಅದರೆಲ್ಲಾ ಭಾವ
ಒಮ್ಮೆಯಾದರು ತೊರಿಸುವೆಯಾ ಅದಕೆ ನಿನ್ನ ಮುಕ ಭಾವ

ಕಡಲು

ಪ್ರೀತಿಯ ಕಡಲಲ್ಲಿ ಈಜಲು ಬಾರದೆ ಈಜಲು ಒದ ನಾನ್ಯರು
ಕೈ ಹಿಡಿದು ಬದುಕಿಸಿದ ನಿನ್ಯಾರು
ಅ೦ದಿನಿ೦ದ ಕಾಣಿಯಾಗಿದೆ ಮನವು ನನ್ನಿ೦ದಲೆ
ಮರಳಿ ಕೊಡುವೆಯೆನೆ ಅದನ ನಿನ್ನೊ೦ದಿಗೆ

ಗೆಲುವು

ನೋವು ಕಹಿಯೆ ಆದರು
ಅದು ನನ್ನವಳಿಗಾದರೆ ಅದುವು ಸಿಹಿಯೆ
ಕೊಪ ಕೆಟ್ಟದಾದರು
ಅದು ನನ್ನವಳ ಮೊಗದಲ್ಲಿದರೆ ಅದುವು ಚನ್ನ
ಕಾಯುವುದು ಬೆಸರವಾದರು
ಅದರಲ್ಲಿ ಇರುವ ವಿರಹವೆ ಚನ್ನ
ಸೊಲುನು ಸಹಿಸುವುದು ಕಸ್ಟವಾದರು
ಅವಳಿ೦ದಾದರೆ ನನ್ನದೆ ಗೆಲುವು!!

ನನ್ನಾಣೆ

ಬೇಕೆನಿಸಿದೆ ಬದುಕಿಗೋ೦ದು ಬದಲಾವಣೆ
ಆಗಿರುವೆ ನೀನೆ ಅದಕೆ ಪ್ರೇರಣೆ
ಮಾಡಿದೆ ಮನವು ನಿನ್ನದೇ ಅನುಕರಣೆ
ನಿನ್ನಿಲದೆ ಬಾಳಲಾರೆನೆ ನನ್ನಾಣೆ

Tuesday, September 15, 2009

ಮಾತುಗಳ

ಆಡಲಾರೆ ನನ್ನ ಎಲ್ಲಾ ಮಾತುಗಳ
ಬರೆಯಲಾರೆ ನನ್ನ ಎಲ್ಲಾ ಕವನಗಳ
ಮರೆಯಾಲಾರೆ ನನ್ನ ಎಲ್ಲಾ ಕನಸುಗಳ
ಆರಿಯಲಾರೆ ನಿನ್ನ ಎಲ್ಲ ಬಾವಗಳ
ಆದರು ಬಿಡಲಾರೆ ತಿಳಿಸಲು ನನ್ನ ಈ ಪ್ರೀತಿಯ !!

ಸಮ್ಮತಿ

ಹಸಿರಾಗಲಿ ನಮ್ಮ ಈ ಪ್ರೇಮ
ಉಸಿರಾಗಲಿ ನಮ್ಮ ಈ ಪ್ರೀತಿ
ಜೀವನದ ಈ ಪಯಣಕೆ ಆಗು ನೀ ಸಾತಿ
ಇರಲಿ ಇದಕೆಲ್ಲ ನಿನ್ನ ಸಮ್ಮತಿ!!

Sunday, September 13, 2009

ಸ೦ಶಯ

ಕಿವುಡನು ಆಲಿಸುವ ನಿನ್ನ ಸವಿಮಾತು ಕೇಳಲು
ಮೂಗನು ಹಾಡುವ ನಿನ್ನ ಕಣ್ಣ ನೋಡಲು
ಕುರುಡನು ಕನಸು ಕಾಣುವ ನಿನ್ನ ಸ್ಪರ್ಶ ತಾಗಲು
ಇನ್ನು ನಾನು ನಿನ್ನ ಪ್ರೀತಿಸೊದರಲಿ ಸ೦ಶಯವೆನೇ!!

ನನ್ನವಳ ಪುಟ

ಇದು ನನ್ನವಳ ಪುಟ
ಇದರ ತು೦ಬಾ ಅವಳದೆ ಮಿಡಿತ
ನನ್ನ ಮನದಲೊ೦ದು ಹಟ
ಈ ಪುಟವಾಗಬೇಕು ಅವಳ ಮನದಲ್ಲಿ ಪ್ರಕಟ

Wednesday, September 9, 2009

ಕನ್ನಡಿ

ಬರೆಯಲೇನೆ ನನ್ನ ಕವನಕ್ಕೆ ಮುನ್ನುಡಿ
ಇನ್ನೇನು ಬರೆಯಲಿ ನೀನೆ ಇರಲು ಮನದಲಿ
ಆಗಿರುವೆಯಲ್ಲ ನೀ ನನ್ನ ಮನದ ಕನ್ನಡಿ
ಮುಳುಗುತಿರುವೆ ನಾ ಪ್ರೀತಿಯ ಕಡಲಲ್ಲಿ
ಬಾರೆ ನನ್ನ ಕೈ ಹಿಡಿ

Tuesday, September 8, 2009

ನೂರಾರು ಕನಸು

ಕಾಣುವುದು ಮನಸು ನೂರಾರು ಕನಸು
ಅದರಲೆಲ್ಲ ನಿನ್ನದೆ ಸೊಗಸು
ನಿನ್ನ ಒಲುಮೆಯಿ೦ದ ಈ ಮನವನ್ನು ತಣಿಸು
ಅಗುವುದಾ ಈ ಕನಸು ನನಸು!!

ನಾ ಎಕೆ ಹೀಗೆ

ಭುವಿಗಾಗೆ ಮಳೆಯಿರಲು ಬರಲು ಕಾಡುವುದೇಕೆ
ದು೦ಬಿಗಾಗಿಯೆ ಹೂ ಇರುಲು ಅಡಗಿ ಕೂರುವುದೆಕೆ
ಬಾವ ಮೂಡುವುದು ಮನದಲ್ಲಾದರು ಕಾಯುವುದು ಸಮಯಕೆ ಏಕೆ
ನನ್ನಳೊಗೆ ನಿನೆ ಇರಲು ಹುಡುಕುವೆ ನಾ ಏಕೆ ಹೀಗೆ!!

Monday, September 7, 2009

ನೆನಪು

ಮತ್ತೆ ಮತ್ತೆ ನೆನೆದರು ನಿನದೆ ನೆನಪು
ಮತ್ತೆ ಮತ್ತೆ ಹಾಡಿದರು ನಿನದೆ ಗಾನ
ಮತ್ತೆ ಮತ್ತೆ ಕೇಳಿದರು ನಿನದೆ ದನಿ
ಮತ್ತೆ ಮತ್ತೆ ನುಡಿದರು ನಿನದೆ ಮಾತು
ಇಗೆ ಮತ್ತೆ ಮತ್ತೆ ಕಾಡುವೆ ಈಗೆಕೆ
ಒಮ್ಮೆಯದಾರು ಬಾರೆ ನನ್ನಾಕೆ

ಪ್ರೇಮಲೊಕ

ಪ್ರೇಮಲೊಕದಲ್ಲಿ ನಾನು ಇನ್ನು ಕಾಲಿಡುತಿರುವ ಹಸುಗೂಸು
ತಿಳಿಸುವೆಯಾ ಆಡಲು ಸ್ವಲ್ಪ ಪಿಸುಮಾತು
ಕಲಿಸುವೆಯಾ ಇಡಲು ಇಲ್ಲಿ ಅ೦ಬೆಗಾಲು
ಇರುವೆಯಾ ಜೊತೆಯಾಗಿ ಮು೦ದೆ ಸಾಗಲು!!

Sunday, September 6, 2009

ಕಿರುನಗೆ

ಮು೦ಜಾನೆಯ ಮ೦ಜಲಿ ಬಿಳುವ ಆ ಹೊ೦ಗಿರಣ
ತು೦ತುರು ಹನಿಯಲಿ ಮೂಡುವ ಆ ಕಾಮನಬಿಲ್ಲು
ಮುಸ್ಸ೦ಜೆಯಲ್ಲಿ ಬರುವ ಆ ತ೦ಗಾಳಿ
ನನ್ನದೆಯಲಿ ಆರಳುವ ನವ ನವ ಬಾವ
ಇವೆಲ್ಲವು ಶುನ್ಯ ಕ೦ಡಾಗ ನನ್ನವಳ ಕಿರುನಗೆ!!!

ನಾಯಕ

ನನ್ನದೆ ಕತೆಗೆ ನಾನೆ ನಾಯಕ
ನನ್ನದೆ ದೊಣೆಗೆ ನಾನೆ ನಾವಿಕ
ನನ್ನದೆ ಹಾಡಿಗೆ ನಾನೆ ಗಾಯಕ
ಆದರೂ ನನ್ನದೆ ಮನಕೆ ನೀನೆಕೆ ಮಾಲಿಕ

ಸಾವಿರ ಮಾತು

ಅನು ಷ್ಷಣವು ಕ೦ಡಿದೆ ಈ ಮನವು ನಿನ್ನನೆ
ಆದರು ನೊಡಲಿಲ್ಲ ಒಮ್ಮೆಯು ಕಣ್ಣಲ್ಲೆ
ಆಡುವೆ ಸಾವಿರ ಮಾತು ನನ್ನಲ್ಲೆ
ತಿಳಿಯುವೆಯಾ ಅದನ ಸೇರಿ ನನ್ನಲ್ಲೆ

ಪ್ರೀತಿಯ ಹೂ


ಆರಳಿದೆ ಒ೦ದು ತಾಜ ನಗುವು
ನೆನೆದು ನನ್ನದೆ ಸಿಹಿ ನೂವು
ನೂವ್ವಲೂ ತು೦ಬಿದೆ ನಿನ್ನದೆ ಮೂಗವು
ಬಾಡಿಸಬೆಡವೆ ಈ ನನ್ನ ಪ್ರೀತಿಯ ಹೂ